ಕಡಲ ಜೀವಿಗಳಿಗೊಂದು ಮರುಜೀವ…..
ಮಾನವನ ಆಧುನಿಕತೆಯ ಸೊಗಡಿನಲ್ಲಿ,ನಮ್ಮ ಸುತ್ತಮುತ್ತಲಿನ ಪರಿಸರವು ದಿನೇ-ದಿನೇ ಹದಗೆಡುತ್ತಿದೆ.ಇಂದು ಜಾಗತಿಕ ತಾಪಮಾನ ಹೆಚ್ಚಳಿಕೆಯಿಂದ,ಧ್ರುವ ಪ್ರದೇಶದ ಜೀವಿಗಳು ಅಳಿವಿನಂಚಿನಲ್ಲಿವೆ.ಮೊಬೈಲ್ ಟಾವರಗಳಿಂದ ಗುಬ್ಬಚ್ಚಿಗಳ ಜೀವಸಂಕುಲವು ಹಾನಿಗೊಳಗಾಗಿದೆ.
ಹಾಗೆಯೇ, ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತೀರಗಳಲ್ಲಿ ಒಮ್ಮೆ ಹೇರಳವಾಗಿ ಸಿಗುತ್ತಿದ್ದ,ಚಿಪ್ಪೆಕಲ್ಲು,ನಿಲೇ ಕಲ್ಲು(Mytilus edulis)ಗಳಂತಹ ಜೀವಗಳು ಮ್ಯಾಂಗನೀಸ್ ಹಾವಳಿಯಿಂದ ,ನಮಗೆ ತಿಳಿಯದ೦ತೆ ವಿರಳವಾಗಿದ್ದು ವಿಪರ್ಯಾಸವೇ ಆಗಿತ್ತು .ಗಾಳಿ ಹಾಗೂ ನೀರಿನೊಂದಿಗೆ ಬೆರೆತುಕೊಳ್ಳುತ್ತಿದ್ದ ಮ್ಯಾಂಗನೀಸ್ ಧೂಳು,ವಾತಾವರಣವನ್ನೇ ಕಲುಷಿತಗೊಳಿಸಿತ್ತು.ಆದರೆ ಇಂದಿಗೆ, ಮ್ಯಾಂಗನೀಸ್ ರಫ್ತನ್ನು ರಾಜ್ಯದಲ್ಲಿ ನಿಷೇಧಿಸಿ ವರ್ಷಗಳೇ ಕಳೆದಿವೆ.ವಾತವರಣವು ಇಂದು ಮೊದಲಿನಿಗಿಂತ ಸುಧಾರಿಸಿ,ಕಡಲ ಜೀವಿಗಳಿಗೊಂದು ಹೊಸ ಬದುಕನ್ನೇ ನೀಡಿದೆ.ವಿರಳವಾಗಿದ್ದ ಚಿಪ್ಪುಗಳು ಪುನಃ ಸುಧಾರಿಸಿಕೊಂಡು ಇಂದು ಹೇರಳವಾಗಿ ಸಿಗಲಾರಂಭಿಸಿವೆ.
ನಾವು ಹಾಗೆಂದು ಪ್ರಕೃತಿಯನ್ನು ಉಳಿಸಲೋಸುಗ, ಎಲ್ಲವನ್ನೂ ನಿಷೇಧಿಸುತ್ತಾ ಹೋಗಲಸಾಧ್ಯ.ಇಂದು ಮಾನವನು ಕೇವಲ ಆಧುನಿಕತೆಯೆಂಬ ಮಾಯಾಕುದುರೆಯನ್ನು ಹತ್ತಿ,ನಮ್ಮ ನಿಸರ್ಗವನ್ನು ನಾಶ ಮಾಡುತ್ತ ಹೋಗುವ ಬದಲು,ಪ್ರಕೃತಿಯ ಸಂರಕ್ಷಣೆಯ ಬಗ್ಗೆ ಸ್ವಲ್ಪವಾದರೂ, ಗಮನಿಸಿದ್ದೇ ಆದಲ್ಲಿ,ನಮ್ಮ ಜೊತೆ-ಜೊತೆಗೆ ನಮ್ಮ ಸುತ್ತಲಿನ ಆರೋಗ್ಯಕರವಾದ ಪರಿಸರವು ನಮ್ಮನ್ನೊಡಗೂಡಲಿದೆ ಎಂಬುದನ್ನು ತೋರಿಸುವುದೇ ನಮ್ಮ ಉದ್ದೇಶ.

ಚಿಪ್ಪೆಕಲ್ಲು (ದೊಸಿನಿಯ ಕೊರುಲೀಯಾ )#

ಚಿಪ್ಪೆಕಲ್ಲು (ದೊಸಿನಿಯ ಕೊರುಲೀಯಾ )#
ಕಡಲ ಚಿಪ್ಪೆಯ ವಿಹಂಗಮ ನೋಟ (ಕಾರ್ನಿಶ್ ಮುಸ್ಸೇಲ್ಸ್ )##
note:All the images above are free from copyright..
For any info. regarding image copyright etc. plz gotofollowing links
# https://en.wikipedia.org/wiki/ File:Dosinia_coerulea_003.jpg
##http://en.wikipedia.org/ wiki/File:CornishMussels.JPG
![]()
ಇಂದ -ರಂಜನ್ ಎಸ್. ನಾಯಕ್ .
ಅಂಕೋಲಾ ಉತ್ತರ ಕನ್ನಡnote:All the images above are free from copyright..
For any info. regarding image copyright etc. plz gotofollowing links
# https://en.wikipedia.org/wiki/
##http://en.wikipedia.org/
ಇಂದ -ರಂಜನ್ ಎಸ್. ನಾಯಕ್ .
No comments:
Post a Comment